ಸೂತ್ರ ಮಾಸಿಕ ಪತ್ರಿಕೆ
ಡಾ. ಟಿ. ಆರ್. ಅನಂತರಾಮು ವಿಜ್ಞಾನ ಪ್ರತಿಷ್ಠಾನದ ಹೊಸ ಸಾಹಸವೇ “ಸೂತ್ರ”. ಗಣಿತ, ವಿಜ್ಞಾನದ ವಿಷಯಗಳನ್ನು ಹೈಸ್ಕೂಲ್, ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಅರ್ಥವಾಗುವ ಭಾಷೆಯಲ್ಲಿ, ಸರಳವಾಗಿ, ಆಕರ್ಷಕವಾಗಿ, ಬುದ್ಧಿಪ್ರಚೋದಕ ರೀತಿಯಲ್ಲಿ ಕೊಡಬೇಕೆಂಬ ಸಂಕಲ್ಪದಿಂದ ಹುಟ್ಟಿದ ಸಚಿತ್ರ ಪತ್ರಿಕೆ ಇದು. ಇಲ್ಲಿ ಪರಿಸರ ವಿಜ್ಞಾನ ಇದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇದೆ. ಪ್ರಶ್ನೋತ್ತರವಿದೆ. ಪಝಲ್ ಇದೆ. ಮೆಚ್ಚಿನ ಪುಸ್ತಕಗಳ ವಿವರಗಳಿವೆ. ಹರಟೆ ಇದೆ, ವೈದ್ಯಕೀಯವಿದೆ. ತಿಂಗಳ ಥೀಮ್ ಹೆಸರಿನಲ್ಲಿ ವಿಶೇಷ ಲೇಖನಗಳ ಗುಚ್ಛವೂ ಇದೆ. ಕನ್ನಡಕ್ಕೊಂದು ಸುಂದರ ವಿಜ್ಞಾನ ಪತ್ರಿಕೆ ಬೇಕೆಂಬ ಬಹುದಿನಗಳ ಕನ್ನಡಿಗರ ಬೇಡಿಕೆಗೆ ಉತ್ತರವೆಂಬಂತೆ ಈ ಪತ್ರಿಕೆಯನ್ನು ಪ್ರತಿಷ್ಠಾನ ರೂಪಿಸಿದೆ. ಓದಿ, ಪ್ರತಿಕ್ರಿಯಿಸಿ. “ಸೂತ್ರ”ದ ಬಳಗದಲ್ಲಿ ನೀವೂ ಒಬ್ಬರಾಗಿ.


